Mungaru Maleye Lyrics In Kannada- Mungaru Male

Mungaru Maleye Lyrics In Kannada is the new Kannada Song from the movie Mungaru Male. The song is sung by Sonu Nigam.

Lyrics of the song written by Yograj Bhat. The music of the song composed by Mano Murthy.

Golden Star Ganesh, Ananth Nag And Pooja Gandhi played the lead roles in the song.

The song is released under the label of Anand Audio.

Mungaru Maleye Kannada Song Details

Song Name: Mungaru Maleye
Singer: Sonu Nigam
Music Composer: Mano Murthy
Lyrics: Yograj Bhat
StarCast: Golden Star Ganesh, Ananth Nag And Pooja Gandhi
Music Label: Anand Audio

Mungaru Maleye Lyrics in Kannada

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ?
ನಿನ್ನ ಮುಗಿಲ ಸಾಲೆ..
ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ, ಪ್ರೀತಿ ಮೂಡಿದೆ..
ಯಾವ ಚಿಪ್ಪಿನಲ್ಲಿ.. ಯಾವ ಹನಿಯು ಮುತ್ತಾಗುವುದೋ?
ಒಲವು ಎಲ್ಲಿ ಕುಡಿಯೊಡೆಯುವುದೋ?
ತಿಳಿಯದಾಗಿದೆ..

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..
ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ..
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ..

Mungaru Maleye Video Song

Leave a Comment

close
error: Content is protected !!